ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ನಮ್ಮ ಈ ಪವಿತ್ರ ಮಣ್ಣು ನಮ್ಮ ಬದುಕು. ನಮ್ಮ ಉಸಿರು. ಪಂಚಭೂತಗಳಲ್ಲಿ ದೇವರನ್ನು ಕಂಡು ಶ್ರದ್ಧಾಭಕ್ತಿಗಳಿಂದ ಆರಾಧಿಸುವ ಸಂಸ್ಕೃತಿ ನಮ್ಮದು ಭಾರತ ಮಾತೆಯದು.
ಪುತ್ತೂರು ತಾಲೂಕಿನ ಪ್ರಕೃತಿ ರಮಣೀಯ, ಹತ್ತಾರು ಕುಟುಂಬಗಳು ಬದುಕು ಕಟ್ಟಿಕೊಂಡಿರುವ, ಕೃಷಿ ಪ್ರಧಾನ ತೆಂಗು ಕಂಗು, ಗದ್ದೆ, ತೋಟಗಳಿಂದ ಕಂಗೊಳಿಸುವ, ಕೊಳ್ತಿಗೆ ಗ್ರಾಮದ “ನಳೀಲು” ಹೆಸರೇ ಪವಿತ್ರ. ಇಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ “ವಲ್ಮೀಕ”ದಲ್ಲಿ ಮೂಡಿ ಭಕ್ತಾದಿಗಳಿಗೆ ದರುಶನ ನೀಡುವುದು ಒಂದು ವಿಶೇಷ. ಭಕ್ತಜನರ ಶ್ರದ್ಧಾಭಕ್ತಿ ನಂಬಿಕೆಗಳಿಂದ ಕಳೆದ ಮೂರು ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆರಾಧನಾ ಕ್ಷೇತ್ರವಾಗಿ ಊರ-ಪರವೂರ ಭಕ್ತಾದಿಗಳ ಇಷ್ಟಾರ್ಥಗಳನ್ನು ಪೂರೈಸುವ ಕಾಮಧೇನುವಾಗಿದೆ.
“ವಲ್ಮೀಕ”ಕ್ಕೆ ಪೂಜೆ ಸಲ್ಲುವ ಶ್ರೀ ಕ್ಷೇತ್ರ ನಳೀಲಿನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸುಮಾರು ಐದು, ಐದೂವರೆ ಅಡಿ ಎತ್ತರವಿರುವ “ವಲ್ಮೀಕ-ಹುತ್ತ”ದಲ್ಲಿ ನೆಲೆ ನಿಂತು ಅಭಯ ನೀಡುತ್ತಿದ್ದಾನೆ.

ಮಲೆ ಮಾಡಾವಿನಿಂದ ಮಣಿಕ್ಕರದವರೆಗೆ ಹಬ್ಬಿರುವ ಪಾಲ್ತಾಡು ಎಂಬ ಊರಿನಲ್ಲಿ ನಳೀಲು ಇರುವ ಪ್ರದೇಶಕ್ಕೆ ಸಾವಿರ ವರುಷಗಳ ಇತಿಹಾಸವಿದ್ದು, ಪೂರ್ವಜರು ಇಲ್ಲಿ ಗುಹೆಯ ರೂಪದಲ್ಲಿದ್ದ ಸ್ಥಳದಲ್ಲಿ ಸುಬ್ರಹ್ಮಣ್ಯ ದೇವರನ್ನು ಆರಾಧಿಸುತ್ತಾ ಬರುತ್ತಿದ್ದರು. ಇಲ್ಲಿ ಹುತ್ತದ ರೂಪದಲ್ಲಿ ನೆಲೆ ನಿಂತ ಸುಬಹ್ಮಣ್ಯನಿಗೆ ದಿನನಿತ್ಯ ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಪುಷ್ಠಿ ನೀಡುವಂತೆ ಆಗಾಗ ನಾಗ ಪ್ರತ್ಯಕ್ಷನಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ, ಆಳೆತ್ತರಕ್ಕೆ ನಿಂತ ವಲ್ಮಿಕವು ಕೆಲವೊಮ್ಮೆ ಪವಾಡದಂತೆ ಕುಬ್ಬಗೊಳ್ಳುವುದೂ ಇದೆ. ಇಲ್ಲಿ ದೇವಸ್ಥಾನಕ್ಕೆ ತನ್ನದೇ ವಿಶೇಷ ಕಾರಣಿಕ ಇದೆ.
ಸಂತಾನ ಭಾಗ್ಯವಿಲ್ಲದವರಿಗೆ ಸಂತಾನ ಭಾಗ್ಯ, ವಿವಾಹ ಆಗದವರಿಗೆ ಕಂಕಣ ಭಾಗ್ಯ, ಶನಿದೋಷ ನಿವಾರಣೆ, ಸರ್ಪದೋಷ ನಿವಾರಣೆಗಾಗಿ ಅಧಿಕ ಸಂಖ್ಯೆಯಲ್ಲಿ ಪ್ರಾರ್ಥಿಸಿ, ಪೂಜೆ ಮಾಡಿಸಿಕೊಂಡು ದೇವರ ಅನುಗ್ರಹ ಪಡೆಯುತ್ತಾರೆ. ಸುಬ್ರಹ್ಮಣ್ಯ ದೇವರು ನಂಬಿದವರನ್ನು ಕೈ ಬಿಡುವುದಿಲ್ಲ ಎನ್ನುವುದು ಭಕ್ತರ ನಂಬಿಕೆ.
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು 2024 ರ ಫೆಬ್ರವರಿ 17 ಶನಿವಾರದಿಂದ 24 ಶನಿವಾರದವರೆಗೆ, ಜಾತ್ರೋತ್ಸವ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದಿದ್ದು, ಇಲ್ಲಿ ಆಶ್ಲೇಷ ಬಲಿ, ಸರ್ಪಸಂಸ್ಕಾರ, ರಂಗಪೂಜೆ, ಕಾರ್ತಿಕ ಪೂಜೆ, ನಾಗ ತಂಬಿಲ ಮೊದಲಾದ ಸೇವೆಗಳು ನಡೆಯುತ್ತಿರುತ್ತದೆ. ಎರಡು ದಿನಗಳ ಕಾಲ ಚಂಪಾಷಷ್ಠಿ ಮಹೋತ್ಸವ. ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ವರ್ಷಾವಧಿ ಜಾತ್ರೋತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಪರಿವಾರ ದೈವಗಳಿಗೆ ನೇಮೋತ್ಸವ ನಡೆಯುತ್ತದೆ.
Nalilu Shri Subramanya Temple
Nalilu Shri Subramanya Temple, situated in the picturesque region extending from Male Madavu to Manikkara boasts a rich history dating back a millennium. Nestled amidst the lush evergreen forests and mountainous landscapes of Puttur Taluk, this sacred site holds profound significance.
Devotees have revered Shri Subramanya Swamy for centuries in the form of a Valmeeka, symbolizing a Serpent Mound. The daily worship at the temple revolves around this sacred structure, and its mystical nature is accentuated by occasional appearances of cobras (Nagas) in the vicinity, signifying divine presence. The Valmeeka itself undergoes intriguing size variations, evoking a sense of awe among the devotees.
Adding to the spiritual ambiance, a perennial water spring graces the southeast corner of the temple, believed by worshippers to be theertha, a sacred source of purity. The serene surroundings, coupled with the temple’s ancient history and mystical occurrences, create a unique and spiritually enriching experience for all who visit.